Gayatri Jalashaya @manjunathbs3841
Gayatri Jalashaya  @manjunathbs3841
Uploaded October 2022 | Updated September 2026, 3 weeks ago
ಗಾಯತ್ರಿ ಜಲಾಶಯ, ಹಿರಿಯೂರು, ಚಿತ್ರದುರ್ಗ ಜಿಲ್ಲೆ. ಇದು ಹಿರಿಯೂರು ತಾಲ್ಲೂಕಿನ ಎರಡನೆ ಜಲಾಶಯ. ಗಾಯತ್ರಿ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 0.97 ಟಿಎಂಸಿ. ಈ ಜಲಾಶಯಕ್ಕೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಾಗೂ ಸಿರಾ ತಾಲ್ಲೂಕಿನ ಬೋರನ ಕಣಿವೆ, ಬುಕ್ಕಾಪಟ್ಟಣ, ಬೆಳ್ಳಾರ ಭಾಗಗಳಿಂದ ಹರಿದು ಬರುವ 'ಸುವರ್ಣಮುಖಿ' ನದಿಯ ಎರಡು ಮೂರು ಟಿಸಿಲುಗಳ ನೀರಿನ ಹರಿವು ಈ ಜಲಾಶಯದಲ್ಲಿ ಸಂಗ್ರಹಗೊಳ್ಳುತ್ತದೆ. ಈ ಜಲಾಶಯವನ್ನು 1963 ರಲ್ಲಿ ಸ್ಥಳೀಯ ಸಂಪನ್ಮೂಲಗಳಲ್ಲಿ ಅಂದಿನ ವೆಚ್ತದಂತೆ 40 ಲಕ್ಷ ರೂಪಾಯಿಗಳಲ್ಲಿ (ಗಾರೆ, ಸೀಮೆಂಟ್ ಬಳಸಿ) ನಿರ್ಮಿಸಲಾಗಿದೆ. ರಾಜಾಳ್ವಿಕೆಯ ಮೈಸೂರು ಸರ್ಕಾರದ ಸಂದರ್ಭದಲ್ಲಿ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ನ್ಯಾಯವಾದಿ ಕೆ. ಕೆಂಚಪ್ಪ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಹಿರಿಯೂರು ತಾಲೂಕಿನ ಕರಿಯಾಲ ಗ್ರಾಮಕ್ಕೆ ಆಹ್ವಾನಿಸಿ ಅಡಿಗಲ್ಲು ಹಾಕಿಸಿದರು. ಹಾಗಾಗಿ ಬರದ ಬಯಲು ಸೀಮೆಯ ಹಿರಿಯೂರು ತಾಲೂಕಿಗೆ ಮಾರಿಕಣಿವೆ ಜಲಾಶಯ (ವಾಣಿವಿಲಾಸ ಸಾಗರ ಜಲಾಶಯ) ನಿರ್ಮಿಸಿದ ಕೃಷಿ ಸಂಸ್ಕೃತಿಯ ಹರಿಕಾರರಾದ ಮೈಸೂರು ಅರಸು ಮನೆತನಕ್ಕೆ ಕೀರ್ತಿ ಸಲ್ಲುತ್ತದೆ. ಹಾಗಾಗಿ ಈ ಜಲಾಶಯಕ್ಕೆ ಅರಸು ಮನೆತನದ ಹೆಣ್ಣು ಮಗಳಾದ 'ಗಾಯತ್ರಿ' ಎಂಬುವವರ ಹೆಸರು ಇಡಲಾಗಿದೆ. ಈ ಜಲಾಶಯಕ್ಕೆ ಸುಮಾರು ಆರು ಸಾವಿರ ಎಕರೆಯಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕೃಷಿಗೆ ಈ ಜಲಾಶಯದಿಂದ 0.67 ಟಿಎಂಸಿ ನೀರು ಹರಿಸಲಾಗುತ್ತದೆ. ಈ ಜಲಾಶಯ 16 ಕಿ.ಮೀ ಉದ್ದದ ಬಲ ನಾಲೆ ಹಾಗೂ 7 ಕಿಮೀ ಉದ್ದದ ಎಡನಾಲೆ ಹೊಂದಿದೆ. ಸಿರಾ ತಾಲ್ಲೂಕಿನ ಹುಣಸೇಹಳ್ಳಿ, ಉಜ್ಜನಕುಂಟೆ ಹಾಗೂ ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸುತ್ತಿದೆ. ಇದು ಭರ್ತಿ ಆದರೆ ಸುತ್ತಲಿನ ಹತ್ತಾರು ಕಿಮೀ ಸುತ್ತಳತೆಯಲ್ಲಿ ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಒಂದು ದಿನದ ಲಘು ಪ್ರವಾಸಕ್ಕೆ ಸುಂದರವಾದ ಸ್ಥಳ. ಇಲ್ಲಿಗೆ ಸೀಮಿತ ಸಂಖ್ಯೆಯ ಬಸ್ ಸೌಲಭ್ಯ ಇದೆ. ರಾಷ್ಟ್ರೀಯ ಹೆದ್ದಾರಿ 4 ರ ಜವನಗೊಂಡನಹಳ್ಳಿ ಯಿಂದ ದಕ್ಷಿಣ ದಿಕ್ಕಿಗೆ ಐದು ಕಿಮೀ ಅಂತರದಲ್ಲಿ ಇದೆ. ಊಟ, ವಸತಿ ಸೌಲಭ್ಯ ಇಲ್ಲದ ಕಾರಣಕ್ಕೆ ಪ್ರವಾಸಿಗರು ಸ್ವಂತ ವ್ಯವಸ್ಥೆ ಮಾಡಿಕೊಂಡು ಹೋಗಬೇಕು. ಜವನಗೊಂಡನಹಳ್ಳಿಯಿಂದ ಆಟೋ ಸೌಲಭ್ಯ ಇದೆ. ಸುತ್ತಲೂ ಹಸಿರು ಗುಡ್ಡಗಳಿವೆ. ಪ್ರಶಾಂತ ವಾತಾವರಣ. ಮಾಹಿತಿ: ಎಂ.ಜಿ. ರಂಗಸ್ವಾಮಿ, ನಿವೃತ್ತ ಉಪನ್ಯಾಸಕರು ಹಾಗೂ ಲೇಖಕರು, ಹಿರಿಯೂರು.
Gayatri JalashayaShejjeshwara & Durga Temple, KarwarSowkooru Durga Parameshwari temple Kundapura UdupiShankaragiri hill, Sringer, Chikkamagalur district of Karnataka, India,Vishnu Padha, Pandharpur Tour With FriendsHoranadu fog covered scenery morning ChikmagalurOur Lady of Fatima Church, BeautySiddaganga jatra 2025 movieMarvelous Thousand pillar temple or Rudreshwara Swamy temple Hanamkonda WarangalGuru Narasimha Temple, Saligrama, UdupiSomeshwara temple and beach ullalRamnagar fort museum, varanasi
Manjunath B S |

Gayatri Jalashaya

SHARE TO X SHARE TO REDDIT SHARE TO FACEBOOK WALLPAPER